ಸಾಗರ ಅಥವಾ ಇನ್ನಿತರ ಜಲರಾಶಿಯಲ್ಲಿ ಅಗಾಧ ಪ್ರಮಾಣದ ಚಲನೆಯುಂಟಾದಾಗ ಜನಿಸುವ ಸಾಗರದ ತರಂಗಗಳ
ಸರಣಿಗೆ ಸುನಾಮಿ (ತ್ಸುನಾಮಿ) ಎಂದು ಕರೆಯಲಾಗುತ್ತದೆ. ಭೂಕಂಪ, ಜ್ವಾಲಾಮುಖಿ, ಬಾಹ್ಯಾಕಾಶದ ಬೃಹತ್
ಗಾತ್ರದ ವಸ್ತುವಿನ ಅಪ್ಪಳಿಕೆ ಇತ್ಯಾದಿ ಸುನಾಮಿ ಅಲೆಗಳನ್ನು ಹುಟ್ಟುಹಾಕುವ ಸಾಮರ್ಥ್ಯ
ಪಡೆದಿವೆ. ಸುನಾಮಿಯು, ಗಮನಕ್ಕೇ ಬಾರದಷ್ಟು ಸಣ್ಣ ಪ್ರಮಾಣದಿಂದ ಹಿಡಿದು ಅತ್ಯಂತ ಹಾನಿಕರವಾದ ನೈಸರ್ಗಿಕ
ವಿಕೋಪದವರೆಗೂ ತನ್ನ ಪ್ರಭಾವ ಬೀರಬಲ್ಲುದಾಗಿದೆ.
ತ್ಸುನಾಮಿ ಎಂಬ ಪದ ಮೂಲತಃ ಜಪಾನಿ ಭಾಷೆಯಿಂದ ಬಂದದ್ದು. ಇಲ್ಲಿ "ತ್ಸು"(津) ಅಂದರೆ "ಬಂದರು"
ಹಾಗು "ನಾಮಿ"( 波) ಎಂದರೆ "ಅಲೆ" ಎಂಬ ಅರ್ಥ ಕೊಡುತ್ತದೆ. ಜಪಾನಿ ಭಾಷೆಯಲ್ಲಿ ಸುನಾಮಿ ಪದವನ್ನು
ಏಕವಚನ ಹಾಗು ಬಹುವಚನ ಎರಡಕ್ಕೂ ಬಳಸುತ್ತಾರೆ, ಆದರೆ ಕನ್ನಡದಲ್ಲಿ ಬಹುವಚನವಾಗಿ "ಸುನಾಮಿಗಳು"
ಎಂದೂ ಇಂಗ್ಲಿಷಿನಲ್ಲಿ "tsunamis" ಕರೆಯುತ್ತಾರೆ. ಅಲ್ಲಿಯ ಮೀನುಗಾರರು ಅಲೆಗಳ ಬಗ್ಗೆ ಹೆಚ್ಚೇನು
ಗೊತ್ತಿಲ್ಲದಿದ್ದರೂ "ಸುನಾಮಿ" ಪದವನ್ನು ಅವರೇ ಹುಟ್ಟಿಹಾಕಿದ್ದಂತೆ. ಸುನಾಮಿಯು ಸಾಗರದ ತೀರಾ
ಒಳ-ಮೇಲ್ಮೈನಲ್ಲಿ ಘಟಿಸುವಂತಹದಲ್ಲ; ಇದು ಅತಿ ದೂರದಲ್ಲಿ ತುಂಬಾ ಚಿಕ್ಕ ವಿಸ್ತಾರವುಳ್ಳ (ಅಲೆಗಳ ಎತ್ತರ)
ಹಾಗೂ ತೀರ ಉದ್ದವಾದ ತರಂಗಗಳನ್ನು ಹೊಂದಿರುತ್ತದೆ (ಬಹಳಷ್ಟು ಬಾರಿ ನೂರಾರು ಕಿಲೋಮೀಟರ್
ಉದ್ದವುಳ್ಳದಾಗಿರುತ್ತದೆ). ಇದೇ ಕಾರಣಕ್ಕೆ ಸಮುದ್ರದಲ್ಲಿ ಬಹಳಷ್ಟು ಬಾರಿ ಇದನ್ನು ಯಾರೂ ಗಮನಿಸುವುದೇ
ಇಲ್ಲ. (ಹೆಚ್ಚಿನ ಮಾಹಿತಿ...)
ಹೆಚ್ಚಿನ ಸಹಾಯ ಪಡೆಯಲು ಅಂಚೆಪೆಟ್ಟಿಗೆಗೆ ನೋಂದಾಯಿಸಿಕೊಂಡು wikikn-l@lists.wikimedia.org
ವಿಳಾಸಕ್ಕೆ ಇ-ಮೇಲ್ ಕಳುಹಿಸಬಹುದು.
ಈ ಪುಟವನ್ನು ಕೊನೆಯಾಗಿ ೦೮:೫೧, ೧ ಜನವರಿ ೨೦೧೧ ರಂದು ಬದಲಾಯಿಸಲಾಗಿತ್ತು.
ದೆಹಲಿ ಉಚ್ಚ ನ್ಯಾಯಾಲಯದ ಆವರಣದಲ್ಲಿ ಬಾಂಬ್ ಸ್ಫೋಟ; ೧೨ ಸಾವು. ಹೊಣೆ ಹೊತ್ತುಕೊಂಡ ಹುಜಿ ಸಂಘಟನೆ,
ಇಂಡಿಯನ್ ಮುಜಾಹಿದ್ದೀನ್.
ಒಂದು ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡಿದ್ದ ಲೋಕಾಯುಕ್ತ ಶಿವರಾಜ್ ವಿ ಪಾಟೀಲ್ ರಾಜೀನಾಮೆ.
ನೇಪಾಳದಲ್ಲಿ ವಿಮಾನ ಅಪಘಾತ. ೧೯ ಜನರ ಸಾವು.
ಈಸೋಪನ ನೀತಿಕಥೆಗಳು ಪ್ರಾಚೀನ ಗ್ರೀಸ್‌‌‌ನಲ್ಲಿ ಜೀವಿಸಿದ್ದ ಓರ್ವ ಗುಲಾಮ ಹಾಗೂ ಕಥಾ ನಿರೂಪಕನಾಗಿದ್ದ
ಈಸೋಪನು ಹೇಳಿದ್ದೆಂದು ಭಾವಿಸಲಾದ ನೀತಿಕಥೆಗಳ ಸಂಗ್ರಹವಾಗಿದೆ.
